ಸುಸ್ವಾಗತ
ಬೇಗೂರು ಶ್ರೀವೀರಭದ್ರೇಶ್ವರ
ಸ್ವಾಮಿ
ದಕ್ಷನ ಯಜ್ಞ ಭಗವಾನ್ ಶಿವನನ್ನು, ಹೃದಯವನ್ನು ಶಕ್ತಿ ಹಾಗೂ ಅಹಂ ಅನ್ನು ದಕ್ಷ ಪ್ರತಿನಿಧಿಸುತ್ತಾನೆ ಎಂಬ ಪ್ರತೀತಿ ಇದೆ. ವೀರಭದ್ರನೆಂದರೆ, ಮಹಾನ್ ಯೋಧ. ಇಂತಹ ಶಕ್ತಿವಂತ ವೀರಭದ್ರನು ಮಹಾವಿಷ್ಣುವಿನ ಸುದರ್ಶನ ಚಕ್ರವನ್ನೇ ನುಂಗುತ್ತಾನೆ.
ಹಿಂದೂ ಧರ್ಮದಲ್ಲಿ ವೇದ ಹಾಗೂ ಪುರಾಣ ಕಥೆಗಳಲ್ಲಿ ತಿಳಿಸಿರುವಂತೆ ವೀರಭದ್ರನ ಅವತಾರ ಒಂದು ನಿರ್ದಿಷ್ಟ ಗುರಿಯ ಈಡೇರಿಕೆಗಾಗಿ ಆಗಿದೆ. ಕೈಲಾಸವಾಸಿ ಶಿವ (ಈಶ್ವರ) ಅವತಾರವೆಂದೇ ಹೇಳಲ್ಪಡುವ ಈ ವೀರಭದ್ರ, ಉಳಿದ ಗಣಗಳಾದ ನಂದಿ, ಭಿರಂಗಿ, ಚಂಡೇಶ್ವರರಂತೆ ಶಿವನ ಪ್ರಥಮ ಗಣನಿದ್ದಂತೆ.
ಹೆಸರಿನ ಮೂಲಾರ್ಥ
ವೀರಭದ್ರ ಹೆಸರು ಸೃಷ್ಟಿಯಾಗಿದ್ದು, ಎರಡು ಸಂಸ್ಕೃತ ಶಬ್ದಗಳಾದ ‘ವೀರ’ ಎಂದರೆ, ನಾಯಕ ಹಾಗೂ ಯೋಧ. ‘ಭದ್ರ’ ಎಂದರೆ, ಸ್ನೇಹಿತ ಎಂದರ್ಥ. ತನ್ನ ಸೃಷ್ಟಿಯೊಂದಿಗೆ ನಾಲ್ಕು ವಿಧ ವಿಧವಾದ ಅಸ್ತ್ರಗಳನ್ನು ಎಂಟು ಕೈಗಳಲ್ಲಿ ಹಿಡಿದುಕೊಂಡು ಅವತರಿಸಿದ್ದಾನೆ. ಬಾಣ, ಖಡ್ಗ, ಧನಸ್ಸು, ಕೇತಕ ಮತ್ತು ಅಸ್ಥಿ ಪಂಜರಗಳು ಇವನ ಆಯುಧಗಳು. ಘಟನೆಯೊಂದರಲ್ಲಿ ಭಗವಾನ್ ವಿಷ್ಣು, ವೀರಭದ್ರನನ್ನು ಸಂಹರಿಸಲು ಸುದರ್ಶನ ಚಕ್ರವನ್ನು ಪ್ರಯೋಗಿಸಿದಾಗ ಅದನ್ನೇ ನುಂಗಿದವ. ಅಂಥಹ ಶಕ್ತಿವಂತ ವೀರಭದ್ರ.
ದಕ್ಷ ಯಜ್ಞ
ಸತಿ, ರಾಜಾ ದಕ್ಷ ಪ್ರಜಾಪತಿಯ ಪುತ್ರಿ. ಕೈಲಾಸವಾಸಿ ಶಿವನನ್ನೇ ಆರಾಧಿಸುತ್ತ ಆತನನ್ನೇ ವಿವಾಹವಾಗಬೇಕೆಂದು ಚಿಕ್ಕಂದಿನಿಂದಲೂ ಬಯಸಿರುತ್ತಾಳೆ. ಆದರೆ, ಈಕೆಯ ತಂದೆ ದಕ್ಷ ಪ್ರಜಾಪತಿಗೆ ಶಿವನನ್ನು ಕಂಡರೆ, ಅಷ್ಟಕಷ್ಟೇ. ಮೂಗು ಮುರಿಯುವವನು. ಬೇರೆಲ್ಲಾ ದೇವತೆಗಳಿಗೆ ಹೋಲಿಸಿದರೆ, ಶಿವ ವಿಚಿತ್ರವಾಗಿ ಕಾಣುವವನು. ಹುಲಿ ಚರ್ಮವನ್ನೇ ಬಟ್ಟೆಯಂತೆ, ಕುತ್ತಿಗೆಯ ಸುತ್ತ ಹಾವಿನ ಮಾಲೆಯಂತೆ ಧರಿಸಿದ, ಭಂಗ್ ಮತ್ತು ಧತುರಾವನ್ನು ಸೇವಿಸುವ ಕಾರಣ, ದಕ್ಷನಿಗೆ ಅಷ್ಟಾಗಿ ಆಗುತ್ತಿರಲಿಲ್ಲ. ಇಷ್ಟಾದರೂ, ಸತಿ ಶಿವನನ್ನೇ ವಿವಾಹವಾದಳು.
ಕೆಲವು ದಿನಗಳ ಬಳಿಕ, ರಾಜಾ ದಕ್ಷ ಪ್ರಜಾಪತಿ ಮಹಾಯಜ್ಞಕ್ಕೆ ಸಿದ್ದತೆ ನಡೆಸಿದ. ಇದಕ್ಕೆ ತನ್ನ 33 ಪುತ್ರಿಯರು ಹಾಗೂ ಅಳಿಯಂದಿರು ಮತ್ತು ದೇವತೆಗಳು ಹಾಗೂ ಋಷಿಗಳನ್ನು ಆಹ್ವಾನಿಸಿದನು. ಆದರೆ, ಕೈಲಾಸವಾಸಿ ಶಿವ ಮತ್ತು ಸತಿಯನ್ನು ಮಾತ್ರ ಆಹ್ವಾನಿಸದೆ, ನಿರ್ಲಕ್ಷ್ಯ ವಹಿಸಿದನು. ಈ ವಿಚಾರ ಸತಿಗೆ ತಿಳಿಯಿತು. ಪ್ರಾಣ ಸಂಕಟದಿಂದ ದುಃಖಿತಳಾದಳು. ಯಜ್ಞದಲ್ಲಿ ಭಾಗವಹಿಸಲೇಬೇಕೆಂದು ಪಟ್ಟು ಹಿಡಿದಳು. ಯಜ್ಞ ನಡೆಯುವ ಸ್ಥಳಕ್ಕೆ ತೆರಳಿದವಳನ್ನು ಶಿವ ತಡೆಯಲು ಶತ ಪ್ರಯತ್ನ ಮಾಡಿದರೂ, ಬಳಿಕ ಅನುಮತಿ ನೀಡಿ, ಶೀಘ್ರ ಮರಳಬೇಕೆಂದು ತಿಳಿಸಿದನು. ಯಜ್ಞ ನಡೆಯುವ ಜಾಗದತ್ತ ತೆರಳಿದ ಸತಿ, ತನ್ನನ್ನು ಹಾಗೂ ತನ್ನ ಪತಿಯನ್ನು ಆಹ್ವಾನಿಸದಿದ್ದುದಕ್ಕೆ ಪಾಲಕರನ್ನು ಪ್ರಶ್ನಿಸಿದಳು. ಇದಕ್ಕೆ ಪ್ರತಿಕ್ರಿಯಿಸಿದ ದಕ್ಷ ರಾಜ, ನಿನ್ನನ್ನು ಆಹ್ವಾನಿಸಿದರೆ, ನಿನ್ನ ಪತಿಯನ್ನು ಆಹ್ವಾನಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ, ಇದು ತನಗೆ ಇಷ್ಟವಿಲ್ಲ ಎಂದು ದಕ್ಷ ಪ್ರಜಾಪತಿ, ಶಿವನನ್ನು ಸಾಧ್ಯವಾದ ರೀತಿಯಲ್ಲಿ ತುಂಬಿದ ಯಜ್ಞ ಸ್ಥಳದಲ್ಲಿ ಅವಮಾನಿಸಿದನು. ತನ್ನ ಪ್ರೀತಿಯ ಸಂಗಾತಿ ಹಾಗೂ ಪತಿ ಶಿವನನ್ನು ಅವಮಾನಿಸಿದ್ದನ್ನು ಸಹಿಸಲಾಗದೆ, ಯಜ್ಞದಲ್ಲಿ ಹಾರಿ, ತನ್ನನ್ನು ತಾನು ಆಹುತಿ ನೀಡಿದಳು. ಸತಿಯನ್ನು ಹಾಗೂ ಕೈಲಾಸವಾಸಿ ಶಿವನನ್ನು ದಕ್ಷ ಪ್ರಜಾಪತಿ ಅವಮಾನಿಸಿದ್ದನ್ನು ತ್ರಿಲೋಕ ಸಂಚಾರಿ ಮುನಿ ನಾರದರು, ದೃಶ್ಯ ಸಮೇತ ಶಿವನಿಗೆ ಸುದ್ದಿ ಮುಟ್ಟಿಸಿದರು. ಹಾಗೂ ಸತಿ ಯಜ್ಞಕ್ಕೆ ಹಾರಿ ತನ್ನ ಆಹುತಿ ನೀಡಿದ್ದನ್ನು ಕೂಡ ತಿಳಿಸಿದನು.
ಶಿವನ ರುದ್ರಾವತಾರ
ಯಜ್ಞ ನಡೆಯುವ ಜಾಗದಲ್ಲಿ ನಡೆದ ಘಟನೆಗಳನ್ನು ಕೇಳಿದ ಕೈಲಾಸವಾಸಿ ಶಿವನಿಗೆ ನಿಜವಾಗಿಯೂ ತನ್ನ ಕೋಪವನ್ನು ತಡೆದುಕೊಳ್ಳಲಾಗಲಿಲ್ಲ. ಅತಿ ಕೋಪ ಪ್ರದರ್ಶಿಸುತ್ತ ಶಿವ, ಎರಡು ಭಯಂಕರ ರೂಪಗಳನ್ನು ಸೃಷ್ಟಿಸಿದ. ಅದೇ ವೀರಭದ್ರ ಮತ್ತು ಭದ್ರಕಾಳಿ. ತನ್ನ ಕೂದಲ ರಾಶಿಯನ್ನು ಬಿಡಿಸಿ, ಶಿವ ಇವರನ್ನು ಸೃಷ್ಟಿಸಿದ. ದಕ್ಷ ಪ್ರಜಾಪತಿ ಮತ್ತು ಆತನ ಸೇನೆಯನ್ನು ಸಂಪೂರ್ಣವಾಗ ನಿರ್ನಾಮ ಮಾಡಲು ಜನಿಸಿದ ವೀರಭದ್ರ, ಅತೀ ಭಯಂಕರನಾಗಿ, ಸ್ವರ್ಗವನ್ನು ನಿಲುಕುವಷ್ಟು ಎತ್ತರಕ್ಕೆ ಬೆಳೆದ. ತುಂಬಿದ ಮೋಡದಂತೆ ಈತನ ದೇಹ ಬಹು ಕುರೂಪವಾಗಿತ್ತು. ಕೈಯಲ್ಲೆಲ್ಲ ಆಯುಧ, ಅಸ್ಥಿ ಪಂಜರಗಳುಳ್ಳ ಆಭರಣವನ್ನು ಧರಿಸಿದ್ದ. ವೀರಭದ್ರ ಮತ್ತು ಭದ್ರಕಾಳಿ ಕ್ರಮವಾಗಿ ಶಿವ ಮತ್ತು ಶಕ್ತಿಯು ಶಕ್ತಿಶಾಲಿ ರೂಪವೇ ಆಗಿದೆ. ಭಗವಾನ್ ಶಿವನ ಸೂಚನೆಯಂತೆ, ವೀರಭದ್ರ ತನ್ನ ಸೇನಾಬಲದಿಂದ ದಕ್ಷ ಪ್ರಜಾಪತಿಯ ಹಾಗೂ ಆತನ ಸೇನೆಯನ್ನು ನಿರ್ಮಾಮ ಮಾಡಿದ. ಸೇನೆಯ ರುಂಡವನ್ನು ಕತ್ತರಿಸಿದ. ಎಲ್ಲ ದೇವರುಗಳು ಹಾಗೂ ಋಷಿ ಮುನಿಗಳು ತಮ್ಮ ಕೈ–ಕಾಲುಗಳನ್ನು ಮುರಿದುಕೊಂಡು ನಿಸ್ಸಹಾಯಕರಾದರು. ಸ್ಕಂದ ಪುರಾಣದಲ್ಲಿ ತಿಳಿಸಿದಂತೆ, ಭಗವಾನ್ ವಿಷ್ಣು ಪ್ರಯೋಗಿಸಿದ ಸುದರ್ಶನ ಚಕ್ರವನ್ನು ಕೂಡ ವೀರಭದ್ರ ನುಂಗಿ ಹಾಕಿದನಂತೆ. ಸತಿಯ ಅಗಲಿಕೆಯನ್ನು ಭಗವಾನ್ ಶಿವನಿಂದ ತಡೆಯಲಾಗಲಿಲ್ಲ. ಯಜ್ಞದಲ್ಲಿ ಆಹುತಿಯಾದ ಜೀವವಿಲ್ಲದ ತನ್ನ ಸತಿಯ ಮೃತ ದೇಹವನ್ನು ಹೊತ್ತುಕೊಂಡು ಲೋಕವನ್ನೆಲ್ಲ ಸುತ್ತಿದ. ಈ ವೇಳೆ, ಶಿವ ತನ್ನ ಹೊಣೆಗಾರಿಕೆಯನ್ನು ಮರೆತನಲ್ಲದೆ ನಿರ್ಲಕ್ಷ್ಯ ವಹಿಸಿದ.
ಶಿವನ ಭಕ್ತನಾದ ದಕ್ಷ
ಯಜ್ಞ ಜಾಗದಲ್ಲಿ ನಡೆದ ಘಟನೆಯಿಂದ ಬೆದರಿ, ಎಲ್ಲಾ ದೇವತೆಗಳು ಹಾಗೂ ಋಷಿಮುನಿಗಳು ಸೃಷ್ಟಿಕರ್ತ ಬ್ರಹ್ಮನ ಮೊರೆ ಹೋದರು. ಆಗ, ಬ್ರಹ್ಮ, ಶಿವನೇ ಎಲ್ಲಕ್ಕೂ ದಾರಿ ತೋರಬಲ್ಲನು. ಇಡೀ ಲೋಕದಲ್ಲಿ ಶಾಂತಿ, ಸಾಮರಸ್ಯ ಕಾಪಾಡುವಂತೆ ನೀವೇ ಅರುಹಬೇಕು ಎಂದನು. ಬಳಿಕ ಬ್ರಹ್ಮ ಎಲ್ಲಾ ದೇವತೆಗಳೊಂದಿಗೆ ಜತೆಗೂಡಿ, ಕೈಲಾಸಕ್ಕೆ ತೆರಳಿ, ದಕ್ಷ ಮಹಾರಾಜನಿಗೆ ಕ್ಷಮೆ ನೀಡುವಂತೆ ಮತ್ತು ದೇವತೆಗಳು ಹಾಗೂ ಋಷಿಮುನಿಗಳ ತುಂಡಾದ ಕೈ–ಕಾಲುಗಳನ್ನು ಪುನರ್ ಜೋಡಣೆ ಮಾಡಬೇಕೆಂದು ಬೇಡಿಕೊಂಡರು. ಅರ್ಧಕ್ಕೆ ನಿಂತಿದ್ದ ಯಜ್ಞ ಪೂರ್ಣವಾಗಬೇಕೆಂದು ಪಾಲನಾಕರ್ತ ವಿಷ್ಣು ಮತ್ತು ಸೃಷ್ಟಿಕರ್ತ ಬ್ರಹ್ಮ ತಿಳಿದಿದ್ದರು. ಬ್ರಹ್ಮ ಕೈಲಾಸದಲ್ಲಿ ಶಿವನನ್ನು ಸಂಭೋಧಿಸಿ, ತನ್ನ ಪುತ್ರನ ನಡವಳಿಕೆಯನ್ನು ಕ್ಷಮಿಸುವಂತೆ, ಜೀವದಾನ ಮಾಡುವಂತೆ ಕೋರಿದರು. ಶಿವ ಅನುಕಂಪದಿಂದ, ದಕ್ಷ ಪ್ರಜಾಪತಿಯ ಸಂಗಾತಿ ಪ್ರಸೂತಿಯತ್ತ ಕನಿಕರ ತೋರಿದ. ತಕ್ಷಣ, ದಕ್ಷನ ತಲೆಗೆ ಆಡಿನ ತಲೆಯನ್ನು ಮರು ಜೋಡಣೆ ಮಾಡಿದ. ದೇವತೆಗಳು ಹಾಗೂ ಋಷಿಮುನಿಗಳ ತುಂಡಾದ ಕೈ–ಕಾಲುಗಳನ್ನು ಮೊದಲಿನ ಸ್ಥಿತಿಗೆ ತಂದನು. ಬಳಿಕ, ಶಾಂತನಾಗಿ, ಯಜ್ಞ ಸಂಪೂರ್ಣಗೊಳಿಸಲು ಅನುಮತಿ ನೀಡಿದ. ತನ್ನ ತಪ್ಪಿನ ಅರಿವಾಗಿ, ದಕ್ಷ ಪ್ರಜಾಪತಿ ಯಜ್ಞ ಸ್ಥಳಕ್ಕೆ ಶಿವನನ್ನು ಆಮಂತ್ರಿಸಿದ. ಹೀಗೆ, ಎಲ್ಲಾ ದೇವತೆಗಳು ಹಾಗೂ ಭಗವಾನ್ ಶಿವನ ಉಪಸ್ಥಿತಿಯಲ್ಲಿ ಯಜ್ಞವು ಸಕಲ ಸಂಪ್ರದಾಯದಂತೆ ನೆರವೇರಿತು. ಈ ಘಟನೆ ಬಳಿಕ, ದಕ್ಷ ರಾಜ ಶಿವನ ಪರಮ ಭಕ್ತನಾದ.
ವೀರಭದ್ರನ ಮಹತ್ವ
ದಕ್ಷನ ಯಜ್ಞ ಭಗವಾನ್ ಶಿವನನ್ನು, ಹೃದಯವನ್ನು ಶಕ್ತಿ ಹಾಗೂ ಅಹಂ ಅನ್ನು ದಕ್ಷ ಪ್ರತಿನಿಧಿಸುತ್ತಾನೆ ಎಂಬ ಪ್ರತೀತಿ ಇದೆ. ವೀರಭದ್ರನೆಂದರೆ, ಮಹಾನ್ ಯೋಧ. ನಮ್ಮೊಳಗಿನ ಅಹಂ ಹಾಗೂ ನಿರ್ಲಕ್ಷ್ಯ ಭಾವವನ್ನು ಸಂಹರಿಸುವ ಸೇನೆ ಎಂದು ಭಾವಿಸಲಾಗುತ್ತದೆ. ಹೀಗಾಗಿ, ವೀರಭದ್ರನ ಸೃಷ್ಟಿಯಾಯಿತು. ಅಹಂ ಭಾವವನ್ನು ಕ್ಷಮಿಸುವುದು ವೀರಭದ್ರನ ಪ್ರಮುಖ ಗುಣಲಕ್ಷಣಗಳಲ್ಲೊಂದು.
ಬೇಗೂರಿನ ಸ್ಥಳ ಮಹತ್ವ
ಬೆಂಗಳೂರು ಎಂದೊಡನೆ ನಮ್ಮೆದುರು ಮೂಡುವುದು ಆಧುನಿಕತೆಯ ದಾಪುಗಾಲು ಹಾಕುತ್ತಿರುವ, ಜತೆಗೇ ವಿಕಾರವಾಗಿ ಬೆಳೆಯುತ್ತಿರುವ ಒಂದು ಅವ್ಯವಸ್ಥಿತ ಮಹಾನಗರ. ಈ ನಗರಕ್ಕೆ ಸಿಲಿ ಕಾನ್ ಸಿಟಿ ಎಂದು ಹೆಸರು ಬರಲು ಕಾರಣವಾದ ಐ.ಟಿ.ಪಿ.ಎಲ್, ಏಲೆಕ್ಟಾನಿಕ್ ಸಿಟಿ ಮುಂತಾದ ಪ್ರದೇಶಗಳು ಅತ್ಯಾಧುನಿಕವಾಗಿ ಬೆಳೆಯುತ್ತಿವೆ. ಆದರೆ ಇಂತ ಪ್ರದೇಶಗಳ ಮಧ್ಯದಲ್ಲಿಯೇ ಅತಿ ಪ್ರಾಚೀನ ಬದುಕಿನ ಕುರುಹುಗಲೂ ಉಳಿದುಕೊಂಡಿವೆ ಎಂಬುದು ಬೆಂಗಳೂರಿನಲ್ಲಿಯೇ ವಾಸಿಸುವ ಬಹಳ ಜನರಿಗೆ ಗೊತ್ತಿಲ್ಲ, ಅಂಥ ಸ್ಥಳಗಳಲ್ಲೊಂದು ಎಲೆಕ್ಟಾನಿಕ್ ಸಿಟಿಗೆ ಹೊಂದಿಕೊಡೇ ಇರುವ ಬೇಗೂರು.ಕ್ರಿ.ಶ. 8-10 ನೇಯ ಶತಮಾನಗಳಲ್ಲಿ ಇದನ್ನು “ಬೆಮ್ಮೂರು’ “ವೆಪ್ಪೂರು (ತಮಿಳು ಶಾಸನಗಳಲ್ಲಿ) ಎಂದು ಕರೆಯತ್ತಿದ್ದರು. ಬೆಂಗಳೂರಿನಿಂದ ಹೊಸರಿಗೆ ಹೋಗುವ ಹೆದ್ದಾರಿಯಲ್ಲಿ 13-15ಕಿ.ಮೀ. ಕ್ರಮಿಸಿ ಬೊಮ್ಮನಹಳ್ಳಿಯ ಸಿಗ್ನಲ್ ನಲ್ಲಿ ಬಲಕ್ಕೆ ತಿರುಗಿ ಮುಂದುವರಿದರೆ ಇಲ್ಲಿಗೆತಲುಪುತ್ತೀರಿ. ಕೆಂಪೇಗೌಡ ಬಸ್ ನಿಲ್ದಾಣದಿಂದ ಇಲ್ಲಿಗೆ ಸುಮಾರು 18-19 ಕಿ.ಮೀ. (ಬೇರೆ ಬೇರೆ ಮಾರ್ಗಗಳಲ್ಲಿ) ದೂರದಲ್ಲಿದೆ ಈ ಐತಿಹಾಸಿಕ ಸ್ಥಳ ( ಮಾರ್ಕೇಟ್,ಶಿವಾಜಿನಗರ, ಬನಶಂಕರಿ ಹಾಗೂ ಮೆಜಿಸ್ಟಿಕ್ ನಿಂದ ಬೇಕಾದಷ್ಟು ಬಸ್ಸುಗಳಿವೆ). ಬೊಮ್ಮನಹಳ್ಳಿಯಿಂದ ಶೇರಿಂಗ್ ಆಟೋ ಗಳೂ ಇವೆ.
ಇಂದು ಬೆಂಗಳೂರಿನ ಒಂದು ಸ್ಕಾಟಲೈಟ್ ಟೌನ್ ನಂತೆ ಬೆಳೆಯುತ್ತಿರುವ ಬೇಗೂರು ಇಲ್ಲಿನ ಐತಿಹಾಸಿಕ ಕುರುಹುಗಳನ್ನೆಲ್ಲ ಅಳಿಸಿಹಾಕಿಲ್ಲ. ಇಲ್ಲಿನ ಮುಖ್ಯ ದೇವಾಲಯವೆಂದರೆ ನಾಗೇಶ್ವರ ದೇವಾಲಯ, ಅದಕ್ಕೆ ಹೊಂದಿಕೊಂಡತೆ ಇರುವ ನಗರೇಶ್ವರ ದೇವಾಲಯ ಊರ ಮಧ್ಯದಲ್ಲಿದೆ. ಈಗ ಇವುಗಳಿಗೆ ಹೊಂದಿಕೊಂಡತೆಯೇ ಕಟ್ಟಡಗಳು ಏಳುತ್ತಿದ್ದರೂ ಇವುಗಳ ಆವರಣ ಸಾಕಷ್ಟು ವಿಶಾಲವಾಗಿವೆ. ದೇವಸ್ಥಾನದ ಒಳಭಾಗ ಗಂಗರ, ಜೋಳರ ಕಾಲದ ಕುರುಹುಗಳನ್ನು ಉಳಿಸಿಕೊಂಡಿದೆ. ದೇವರ ಎದುರಿನ ಪೀಠದಂತಿರುವ ಭಾಗದ ತಳಭಾಗದುದ್ದಕ್ಕೂ ಗ್ರಂಥ ಲಿಪಿ, ತಮಿಳು ಭಾಷೆಯ ಶಾಸನಗಳಿವೆ. ಹಾಗೆಯೇ ನಗರೇಶ್ವರ ದೇವಾಲಯದ ಬಾಗಿಲು ಪಟ್ಟಿಯ ಮೇಲೂ ಕನ್ನಡದ ದಾನ ಶಾಸನವಿದೆ. ಆದರೆ ನಿಜವಾಗಿ ನಮ್ಮಂಥ ಸಾಮಾನ್ಯರಿಗೂ ಕುತೂಹಲ ಹುಟ್ಟಿಸುವ ಶಾಸನಗಳಿರುವುದು ಈ ದೇವಾಲಯದ ಆವರಣದುದ್ದಕ್ಕೂ ಜೋಡಿಸಿರುವ ಕಲ್ಲುಗಳ ಮೇಲೆ.
ಬೆಂಗಳೂರು ಎನ್ನುವ ಪ್ರಾಚೀನ ಹೆಸರು ಬೆಂಗಳೂರಿಗೆ ಆ ಹೆಸರು ಬರಲು ಕಾರಣವನ್ನು ಹಲವು ವಿದ್ವಾಂಸರು ಹಲವು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ ಅದರಲ್ಲಿ “ಬೆಂದಕಾಳೂರು’ ಎಂಬುದೇ ಬೆಂಗಳೂರು ಆಯಿತು ಎಂಬುದು ಜನಪ್ರಿಯ ನಂಜಿಕೆ. ಆದರೆ ಕ್ರಿಶ ಒಂಭತ್ತನೇಯ ಶತಮಾನದ ಹೊತ್ತಿಗಾಗಲೆ (ಕ್ರಿಶ.890 ಕ್ಕಿಂತ ಮುಂಚೆಯೇ ) “ಬೆಂಗಳೂರು” ಎಂಬ ಗ್ರಾಮ ಅಸ್ತಿತ್ವದಲ್ಲಿತುು ಎಂಬುದನ್ನು ಇಲ್ಲಿಯ ಶಾಸನವೊಂದು ಸ್ಪಷ್ಟವಾಗಿ ಹೇಳುತ್ತದೆ. “ (ಶ್ರೀಮತ್ ನಾಗತರನ್” ಮನೆವಗ ತಿಪೆರ್ಮ್ಯಣ ಶೆಟ್ಟಿ ಬೆಂಗುಳೂರು ಕಳೆಗ ಎಂದು ಈ ಶಾಸನ ಹೇಳುವುದರಿಂದ ಅದು ಇಂದುನ ಬೆಂಗಳೂರೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಈ ಶಾಸನದ ಕಲ್ಲು ಇಂದು ಮಳೆ ಬಿಸಿಲಿಗೆ ಒಡ್ಡಿಕೊಂಡು ಶಾಸನದ ಅಕ್ಷರಗಳು ಓದಲು ಕಷ್ಟ ಸಾಧ್ಯವಾಗಿದೆ ಮುಂದೊಂದು ದಿನ ಈ ಅಕ್ಷರಗಳು ಅಳಿಸಿ ಹೋಗಿ ಮಹತ್ವದ ದಾಖಲೆಗಳುಕಣ್ಮರೆಯೇ ಆಗಬಹುದು. ಬೆಂಗಳೂರು ಎಂಬ ಹೆಸರು ಉಲ್ಲಿಖಿತ ವಾಗಿರುವ ಕಲ್ಲಿನ ಶಾಸನ ಇರುವುದು ಬೇಗೂರಿನಲ್ಲೆ ಮಾತ್ರ. ಹಾಗೆಯೇ ಬೇಗೂರಿನಲ್ಲಿ ಸಿಕ್ಕಿದ ಇನ್ನೊಂದು ಶಾಸನದ ಕಲ್ಲು ಕೂಡ ತುಂಬಾ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಇದು ಗಂಗ ದೊರೆ ಎರೆಯಪ್ಪರಸನಿಗೂ ಹಾಗೂ ವೀರಮಹೇಂದ್ರ ಎನ್ನುವವನಿಗೂ (ಇವನು ಯಾರು ಎಂಬುದರಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ, ಇರಲಿ) ಯುದ್ದ ನಡೆದು ಬೇಗೂರಿನ (ಬೆಮ್ಮೂರಿನ) ನಾಗತ್ತರ ಆ ಮಹೇಂದ್ರನನು ಆನೆಯ ಮೇಲೆಯೇ ನುಗ್ಗಿ ಕೊಂದು ತಾನೂ ಸತ್ತದ್ದನ್ನು ವರ್ಣಿಸುವುದಲ್ಲದೆ ಈ ನಾಗತ್ತರನ ಪಟ್ಟವನ್ನು ಬೇರೊಬ್ಬರಿಗೆ ಕಟ್ಟಿ ಅವನಿಗೆ ಈಗಿನ ಬೇಗೂರನ್ನು ಸೇರಿ 12 ಊರುಗಳನ್ನು ಉಂಬಳಿ ಕೊಟ್ಟಿದ್ದನ್ನು ಉಲ್ಲೇಖಿಸುತ್ತದೆ. ಇಷ್ಟೇ ಆಗಿದ್ದರೆ ಇದು ಮಹತ್ವದಾಗುತಿರಲಿಲ್ಲ, ಆದರೆ ಆಗ ನಡೆದ ಆ ಇಡೀ ಯುದ್ದವನ್ನು ಶಿಲ್ಪದಲ್ಲಿ ಸೆರೆಹಿಡಿದಿದೆ ಈ ಶಾಸನ. ಯುದ್ದದಲ್ಲಿ ನೆಲಕ್ಕೆ ಬಿದ್ದವರನ್ನು ಕಾಗೆಗಳು ಕುಕ್ಕುಶ್ತಿರುವ, ಪಿಶಾಚಿಗಳು ನರ್ತಿಸುತ್ತಿರುವ, ಬಿದ್ದ ಕುದುರೆಗಳ, ಒಟ್ಟು ಇಡೀ ಯುದ್ದರಂಗದ ಭೀಕರತೆಯನ್ನು ನಿಮ್ಮೆದುರು ಕಟ್ಟಿನಿಲ್ಲಿಸಿ ಒಂದು ವರ್ಷಗಳ ಹಿಂದಿನ ಯುಧ್ದಭೂಮಿಯ ಸ್ಟೀಲ್ ಫೋಟೋವೇನೋ ಎನ್ನುವಂತೆ ತೋರಿಸುತ್ತದೆ. ಇದು ಇಡೀ ಭಾರತದಲ್ಲಿ ಇಂಥ ಶಾಸನಗಲ್ಲು ಇದುವ್’ರೆಗೆ ಸಿಕ್ಕಿಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ. ಈ ಶಾಸನದ ಕಲ್ಲು ಮೊದಲು ಕರ್ನಲ್ ಹೆನ್ಪಿ ಡಿಕ್ಷನ್ ಕಣ್ಣಿಗೆ ಬಿತ್ತು ಬೇಗೂರಿನಲ್ಲಿಯೇ ಸಿಕ್ಕಿದ ಈ ಶಾಸನವನ್ನು ಮೈಸೂರಿನ ಆಗಿನ ಚೀಫ್ ಕಮೀಷನರ್ ಆದ ಮಿ.ಬೌರಿಂಗ್ ಅವರು ಬೆಂಗಳೂರು ವಸ್ತು ಸಂಗ್ರಹಾಲಯಕ್ಕೆ ಸಾಗಿಸಿದರು. ಈಗಲೂ ನೀವು ಬೆಂಗಳೂರಿನ ಮ್ಯೂಸಿಯಂನಲ್ಲಿ ನೋಡಬಹುದು.
ಬೇಗೂರಿನ ನಾಗೇಶ್ವರ ದೇವಸ್ಥಾನದ ಆವರಣದಲ್ಲಿಯೇ ಇರುವ ಅದೇ ಕಾಲದ ವೀರಗಲ್ಲೊಂದರಲ್ಲಿ ಕೂಡ ಯುದ್ದರಂಗದ ವಾಸ್ತವಿಕ ಚಿತ್ರಣವನ್ನು ಸೆರೆಹಿಡದುದನ್ನು ನೋಡಬಹುದು. ಬೇರೆ ಬೇರೆ ಉದ್ದೇಶಗಳಿಗಾಗಿ ಆ ಕಾಲದಲ್ಲಿ ಹಸುಗಳನ್ನು ಕರೆದೊಯ್ಯುತ್ತಿದ್ದರು. ಕೆಲವೊಮ್ಮೆ ರಾಜಕೀಯಕಾರಣಗಳಿಗಾಗಿ ಕೆಲವೊಮ್ಮೆ ಹಸುಗಳನ್ನು ಕದಿಯುವ ಉದ್ದೇಶದಿಂದಲೇ, ಕೆಲವೊಮ್ಮೆ ಊರಜಗಳಗಳಿಂದ ಹೀಗೆ ಇವನ್ನು *ತುರುಗೋಳ್’ ಎಂದು ಕರೆಯುತ್ತಿದ್ದರು. ಇಂಥ ತುರುಗೋಲಳ್ನಲ್ಲಿ ಮಾಡಿದ ವೀರನ ಸ್ಮಾರಕವೂ ಇಲ್ಲಿದೆ. ಒಂದೆಡೆ ಹಸು, ಎಮ್ಮೆ ಕುರಿಗಳ ಶಿಲ್ಪಕೆತ್ತನೆಯಿದ್ದು ಅವುಗಳನು ಮರಳಿ ಗಳಿಸುವ ವೀರನ ಶಿಲ್ಪವಿದೆ ಅಲ್ಲದೆ ಇನ್ನೂ ಅನೇಕ ಶಾಸನಗಳೂ, ಸುಂದರ ಶಿಲ್ಪಗಳಿರುವ ವೀರಗಲ್ಲೂಗಳೂ ಇಲ್ಲಿವೆ, ಒಟ್ಟಿನಲ್ಲಿ ಇಲ್ಲಿನ ಶಾಸನಗಳನ್ನೂ ವೀರಗಲ್ಲೂಗಳನ್ನೂ ಗಮನಿಸುತ್ತ ಹೋದರೆ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದಿನ ಜನಜೀವನ ನಿಮ್ಮ ಕಣ್ಣೆದುರು ತೆರೆಯುತ್ತದೆ.
ಶ್ರವಣಪ್ಪನ ದಿಣ್ಣೆ
ಊರಿನ ಮಧ್ಯದಲ್ಲಿಯೆ ಅವರಿವರನ್ನು ಕೇಳುತ್ತ, ಸಂದಿ ಗೊಂದಿಗಳನ್ನು ಹಾಯತ್ತ ನಡೆದರೆ ನೀವು ಶ್ರವಣಪ್ಪನ ದಿಣ್ಣೆ ಎನ್ನುವ ಜಾಗ ತಲುಪುತ್ತೀರಿ. ಒಂದು ಕಾಲದಲ್ಲಿ ಇಲ್ಲಿ ಸುಂದರವಾದ ಜೈನ ಬಸದಿಯಿತ್ತು. ಇದಕ್ಕೆ ಮರಸು ನಾಡಿನ ದಂಡ ನಾಯಕನೊಬ್ಬ 15 ನೇ ಶತಮಾನದ ಆದಿ ಭಾಗದಲ್ಲಿ ದಾನ ನೀಡಿದ ಶಾಸನದ ಪುರಾವೆಯೂ ಇದೆ. ಆದರೆ ಈಗ ಇಲ್ಲಿ ಉಳಿದಿರುವುದು ಒಂದಿಷ್ಟು ಕುರುಚಲು ತುಂಬಿದ ಜಾಗ ಮಾತ್ರ. ಇವುಗಳ ಮಧ್ಯೆಯೇ ಧ್ಯಾನ ಮಗ್ನ ಭಂಗಿಯಲ್ಲಿರುವ ಸುಂದರವಾದ ಪುರುಷ ಪ್ರಮಾಣದ ಜಿನ ವಿಗ್ರಹವಿದೆ. ಇದರ ರುಂಢ ಭಾಗ ಕಣ್ಮರೆಯಾಗಿದ್ದರು ಮುಂಡ ಭಾಗ ಮನಸೆಳೆಯುವಂತಿದೆ. ಪಕ್ಕದಲ್ಲಿಯೇ ಇನ್ನೊಂದೆರಡು ನೆಲದ ಮೇಲೆಊರುಳಿದ ಮೂರ್ತಿಗಳಿವೆ. ಬಸದಿಯ ಕಲ್ಲುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಸದ್ಯದಲ್ಲಿ ಆಕಡೆ ಈಕಡೆ ಮನೆಗಳು ಈ ಸ್ಥಳವನ್ನು ಒತ್ತಿಯೇ ಮೇಲಬ್ದಿವೆ. ಇನ್ನೂ ಕೆಲವೇ ವರ್ಷಗಳಲ್ಲಿ ಈ ಸ್ಥಳವು ಬೃಹತ್ ಬೆಂಗಳೂರಿನ ಉದರದಲ್ಲಿ ಸೇರಿ ಜೀರ್ಣವಾಗುತ್ತದೆ.ಊರಿನ ಒಳಗೆ ನಡೆಯುತ್ತ ಹೋದರೆ ಊರಿನ ಇನ್ನೊಂದು ಕೊನೆಯಲ್ಲಿರುವ (ಇನ್ನಿ ಉಳಿದು ಕೊಂಡಿರುವ) ಮಣ್ಣಿನ ಕೋಟೆಯ ಆವರಣವನ್ನುತಲುಪುತ್ತೀರಿ. ಇದು ಬಹುಶಹ ಹತ್ತನೇಯ ಶತಮಾನದ ಅಥವಾ ಅದಕ್ಕೂ ಹಿಂದಿನ ಕೋಟೆ. ಏಕೆಂದರೆ ಪ್ರವೇಶದ್ವಾರದ ಎಡಭಾಗದಲ್ಲಿರುವ ದ್ವಾರಪಟ್ಟಿಯ ಮೇಲಿರುವ ಚಿಕ್ಕ ಶಾಸನದಲ್ಲಿ ಒಂದು “ನಾಗತ್ತರನ ಮಗಳು ರೊಣ್ಡೆಬ್ಬೆ ಎನ್ನುವವಳು ಸನ್ಯಸನ ಮಾಡಿ ಸತ್ತಳು’ ಎಂಬುದನ್ನುತಿಳಿಸುತ್ತದೆ. (ಇಂಥ ಶಾಸನಗಳನ್ನು “ನಿಸಿದಿ ಶಾಸನ’ ಎನ್ನುತ್ತಾರೆ) ಈ ನಾಗತ್ತರ ಈ ಹಿಂದೆಯೇ ಶಾಸನದಲ್ಲಿ ಉಲ್ಲೇಖಿತವಾದ ಬೆಮ್ಮೂರಿನ (ಈಗಿನ ಬೇಗೂರು) ಒಡೆಯ. ಈ ಕೋಟೆಯ ಒಳಭಾಗ ವಿಶಾಲ ಬಯಲಿನಂತಿದ್ದು ಮಧ್ಯದಲ್ಲಿ ಒಂದು ವೇಣುಗೋಪಾಲ ದೇವಾಲಯವಿದೆ. ಬೇಗೂರಿನ ಶಾಸನಗಳನ್ನೇನಾದರೂ ಅರ್ಥ ಮಾಡಿಕೊಳ್ಳಲು ನಿಮಗೆ ಸಾಧ್ಯವಾದರೆ ಆ ಕಾಲದ ಯುದ್ದ ಹೇಗೆ ನಾಗತ್ತರನೆನ್ನುವ ಬೇಗೂರಿನ ಒಡೆಯನ ಇಡೀ ವಂಶವನ್ನು ನಾಶ ಮಾಡಿತೆನ್ನುವುದನ್ನು ಕಣ್ಣೆದುರೆ ಕಾಣುತ್ತೀರಿ. ಇದಲ್ಲದೆ ಲಿಪಿ ಭಾಷೆಗಳ ಅಭ್ಯಾಸಿಗಳಿಗೂ ಬೇಗೂರು ಹಾಗೂ ಸುತ್ತಲಿನ ಹೊಂಗಸಂದ್ರ ಮುಂತಾದ ಹಳ್ಳಿಗಳು ಬಹಳ ಕೂತುಹಲ ಹುಟ್ಟಿಸುತ್ತವೆ. ಗಂಗರು, ನೊಣಬರು, ಚೋಳರು ಮೊದಲಾದವರು ಪದೇ ಪದೇ ಆಕ್ರಮಿಸುತ್ತಿದ್ದ ಪ್ರವೇಶ ಇದಾದ್ದರಿಂದ ನೀವು ಕನ್ನಡ ತಮಿಳು ತಮಿಳುಗನ್ನಡ ಭಾಷೆಯ ಶಾಸನಗಳಲ್ಲದೆ ಕಾಲ ಕಾಲಕ್ಕೆ ಬದಲಾದ ಲಿಪಿಯನ್ನು ಕಾಣಬಹುದು.
ಬೇಗೂರಿನ ರೋಚಕ ಐತಿಹಾಸಿಕ ಸಂಗತಿಗಳಿದ್ದರೂ ಸಾಮಾನ್ಯ ನೋಡುಗನೊಬ್ಬನಿಗೆ ಈ ಯಾವ ಸಂಗತಿಗಳೂ ತಿಳಿಯಲಾರವು ಏಕೆಂದರೆ ಕೊನೆಯ ಪಕ್ಷ ಈ ಶಾಸನಗಳ ಮಹತ್ವವೇನು ಎಂಬುದನ್ನು ಕ್ಲಿಷ್ಟವಾಗಿಯಾದರು ತಿಳಿಸುವ ಯಾವ ಫಲಕಗಳು ಇಲ್ಲಿಲ್ಲ. ಆ ರೀತಿಯ ಫಲಕಗಳನ್ನು ಇಂಥ ಕಡೆ ಹಾಕದಿದ್ದರೆ ದೇವಾಸ್ಥನಕ್ಕೆ ಹೋಗಿ ಕೈಮುಗಿದು ಬಂದ ಪ್ರವಾಸಿ ಈ ಕಲ್ಲುಗಳತ್ತ ತಿರುಗಿಯೂ ನೋಡದೇ ಹೋಗುತ್ತಾನೆ. ಹಾಗಾಗಿ ಇಂಥ ಐತಿಹಾಸಿಕ ಮಹತ್ವವಿರುವ ಪ್ರವಾಸಿ ತಾಣಗಳಲ್ಲಿ (ಶ್ರೀಸಾಮಾನ್ಯನಿಗೂ ಅವುಗಳ ಮಹತ್ವದ ಅರಿವಾಗುವಂತಹ ವಿವರಗಳನ್ನು ಪಕ್ಕದಲ್ಲಿಯೇ ಒದಗಿಸಿದರೆ ಎಷ್ಟೋ ಜನ ಇದರ ಉಪಯೋಗ ಪಡೆದುಕೊಳ್ಳುತ್ತಾರೆ, ಮಾತ್ರವಲ್ಲ ಇವನ್ನು ನಾಶಮಾಡಬಾರದೆಂಬ ಪ್ರಜ್ಞೆಯೂ ಬೆಳೆಯೂತ್ರದೆ. ಕ್ರಿಪೂ. 15ನೇ ಶತಮಾನದಲ್ಲಿ ಕಲೆ ಸಂಸ್ಕೃತಿಗಳಿಗೆ ರಾಜಾಶ್ರಯವಾಗಿದ್ದ ನಿಂಬಾಪುರಿ ಕ್ಷೇತ್ರ ಬೇಗೂರು ಬೆಂಗಳೂರಿನ ಸ್ಥಾಪಕ, ಮೂಲಪುರುಷ ಕೆಂಪೇಗೌಡ ಹೊಸ ಸಾಮ್ರಾಜ್ಯ ಕಟ್ಟಲು ತಂಜಾವೂರಿನಿಂದ ತನ್ನ ತಾಯ್ನಡಿಗೆ ಬರುವ ವೇಳೆಗಾಗಲೇ ಜೈನರು, ಗಂಗರು ಹಾಗೂ ಚೋಳರ ಆಳ್ಲಿಕೆಗೆ ಒಳಪಟ್ಟು, ಅವರೊಂದ ಕಟ್ಟಲ್ಪಟ್ಟ ಹಳೇ ದೇವಾಲಯ ಕೋಟೆ ಕೊತ್ತಲಗಳು ಇಲ್ಲಿದ್ದವು.
ಇಲ್ಲಿ ದೊರೆತ ಪ್ರಾಚೀನ ಶಾಸನಗಳನ್ವಯ ತಲಕಾಡಿನಲ್ಲಿ ತಮ್ಮಶೈವ ಪರಂಪರೆಯನ್ನು ಬೆಳೆಸಿ ಅಲ್ಲಿ ಪಂಚಲಿಂಗಗಳನ್ನು ಪ್ರತಿಷ್ಟಾಪಿಸಿ ಬೃಹತ್ ದೇವಾಲಯ ಕಟ್ಟಿದ ಗಂಗಾರಸರು ಹಾಗೂ ತಂಜಾವೂರಿನ ಚೋಳರು ತಮ್ಮ ಸ್ನೇಹದ್ಯೋತಕವಾಗಿ ಇಲ್ಲೂ ಪಂಚಲಿಂಗ ದೇವಾಲಯಗಳನ್ನು ಕಟ್ಟಿಸಿದರು ಎಂದು ತಿಳಿದು ಬರುತ್ತದೆ. ಮಹಾ ಅಪರಾಧವೆಸಗಿ ಮುಟ್ಟುದುದೆಲ್ಲಾ ಅಮೇಧ್ಯವಾಗಿ ತನ್ನ ಪಾಪ ಕಳೆಯಲು ನಿಶ್ಚಿತ ಮೂಹೂರ್ತವೊಂದರಲ್ಲಿ ಶತಲಿಂಗಾಭಿಷೇಕ ಹಾಗೂ ನವ ಶಿವಾಲಯ ನಿರ್ಮಾಣಕ್ಕೆ ತಂಜಾವೂರಿಗೆ ಕುಲೋತ್ತುಂಗ ಮುಂದಾಗುತ್ತಾನೆ. ಕೆಲ ಸಾಮಂತರು ಹಾಗೂ ಕರ್ನಾಟಕದ ಹೆಸರಾಂತ ಗಂಗಾರಸರು ಕುಲೋಂತುಂಗನ ಪಾಪ ಪರಿಹಾರ ಮಾಡಲು ಶತಲಿಂಗಗಳ ಪೈಕಿ ಪಂಚಲಿಂಗಗಳು ಸೇರಿವೆ ಎನ್ನುವುದು. 8ನೇ ಶತಮಾನದಲ್ಲಿ ಸ್ನೇಹಕ್ಕಾಗಿ ದೇವಾಲಯ ಕಟ್ಟಿಸಿದರು ಇಲ್ಲಿರುವ ಶಿಲಾಮೂರ್ತಿಗಳ ಆಧಾರ ಪ್ರಾಚ್ಯ ಸಂಶೋಧನ ಇಲಾಖೆಯಲ್ಲಿ ಇಲಾಖೆಯ ನಿರ್ದೇಶಕರೂ ಆಗಿದ್ದ ರಾಬರ್ಟ್ ರೈಸ್ ಶಾಸನ ಬರಹಗಳ ದೇವಾಲಯ ಪ್ರತ್ಯೇಕ ಗರ್ಭಗುಡಿ, ನವರಂಗ ಸುಖನಾಸಿನಿಗಳನ್ನು ಹೊಂದಿದೆ. ಜೋಳೇಶ್ವರ-ಪಾರ್ವತಿ ದೇವಾಲಯ ಪ್ರಮುಖ ದೇವಾಲಯ ಆಗಿದ್ದು.ಶ್ರೀ ನಾಗೆಶ್ವೇರಸ್ವಾಮಿ, ಕಾಳ ಕಮಠೇಶ್ವರಸ್ವಾಮಿ, ಕರುಣೇಶ್ವರಸ್ವಾಮಿ ದೇವಾಲಯಗಳು ನಯನ ಮನೋಹರವಾಗಿವೆ. ದೇವಸ್ಥಾನದ ಮುಂಭಾಗದಲ್ಲಿರುವ ಮಿಥುನ ಶಿಲ್ಪ ಹಾಗೂ ಅಲ್ಲಿರುವ ಶಿಲಾಶಾಸನ ಬೆಂಗಳೂರಿನ ಬಗ್ಗೆ ಈವರೆಗೆ ಇದ್ದ ಕಲ್ಪನೆಯನ್ನು ಅಳಿಸಿ ಹಾಕುತ್ತದೆ. ಕೆಂಪೇಗೌಡರು ಬೆಂಗಳೂರು ಎಂಬ ಹೊಸ ಊರನ್ನು ಕಟ್ಟಿದರು. ಬೆಂದಕಾಳೂರು, ಬೆಂಗಾಡೂರು ಪದದಿಂದ ಚಾಲ್ತಿಗೆ ಬಂತು. ಬೆಂಗಳೂರು ಎಂಬ ಪದವನ್ನು ಪತ್ತೆ ಹಚ್ಚಿದರು.
ಈ ಹೊಸ ಸಂಶೋಧನೆಯಿಂದ ತಿಳಿದು ಬರುವುದೇನೆಂದರೆ ಕೆಂಪೇಗೌಡ ತಂಜಾವೂರಿನಿಂದ ಈ ಬೆಂಗಳೂರಿಗೆ ಬಂದು ಜೈನ ದೊರೆ ನಾಗತ್ತಾರ ಹಾಗೂ ತೊಂಡಬೈಯವರು ಕಟ್ಟಿಕೊಡ ಮಣ್ಣಿನ ಕೋಟೆಯ ಪಾಳೆಯಗಣರನಾಗಿದ್ದು, ನಂತರ ಈ ಸುಂದರ ಹೆಸರಿನ ನಗರ ಕಟ್ಟಿ ವಿಜಯನಗರದ ಅರಸರ ಅನುಮತಿ ಪಡೆದು ಕೋಟೆ ಕೊತ್ತಲಗಳಿಂದ ಆವೃತವಾದ ಹೊಸ ಬೆಂಗಳೂರನ್ನು ಕಟ್ಟಿರಬೇಕು.ಇಲ್ಲಿ ಒಂದು ಶಾಸನದಲ್ಲಿ ನಾಗತ್ತಾರ ಮತ್ತು ಕೊಂಡಬ್ಬೆ ಹೆಸರುಗಳು ಒಂದು ನೆಲ ದೂರದಲ್ಲಿ ಶಿರಸ್ಸಿಲ್ಲದ ಜನವಿಗ್ರಹವೊಂದಿರುವ ಗುಡ್ಡವನ್ನು ಶ್ರಣಪ್ಪನ ಬೆಟ್ಟ ಎಂದು ಜನ ಕರೆಯುತ್ತಿರುವುದರಿಂದ ಇದು ಜೈನ ಪ್ರಾಬಲ್ಯಕ್ಕೊಠಪಟ್ಟಿತ್ತೆಂದು ಹೇಳಬಹುದು.
ಪಂಚಲಿಂಗ ದೇವಸ್ಥಾನಗಳ ಒಳಹೊಕ್ಕು ನಿಂತು ಮೇಲೆ ನೋಡಿದಾಗ ಕಾಣುವ ಅಷ್ಟದ್ದಿಕಾಲ ಗ್ರಹಗಳು, ದೇವತೆಗಳ ವಾಹನ ರಮ್ಮವಾಗಿದೆ, ಇಲ್ಲಿನ ಒಂದು ವಿಶೇಷವಂದರೆ, ಪ್ರತಿ ದೇವಸ್ಥಾನದಲ್ಲೂ ಅಷ್ಟದಿಕ್ಟಾಲಕರ ಸ್ಥಾನದಲ್ಲಿ ಬದಲಾವಣೆ ಇದೆ. ಈ ದೇವಾಸ್ಥನದ ಹೊರಭಾಗದಲ್ಲಿ ಗೋಪುರದ ಕೆಳಗೆ ಪಂಚತಂತ್ರದ ಕತೆಯಲ್ಲಿ ಬರುವ ಕೋತಿ ಮೊಸಳೆ ಪ್ರಸಂಗವನ್ನು ವಿವರವಾಗಿ ಕೆತ್ತಲಾಗಿದೆ. ಒಳಭಾಗದಲ್ಲಿ ನಾಲ್ಕು ಕಂಭಗಳಿದ್ದು ಜೈನ ಬಸದಿಯ ಕಂಬಗಳನ್ನು ಹೋಲುತ್ತದೆ. ರಾಜಾ ಕುಲೋತ್ತುಂಗನಿಂದ ನಿರ್ಮಿಸಲ್ಪಟ್ಟ ಈ ಜೋಳ ಶೈಲಿಯ ದೇವಾಲಯಗಳಲ್ಲಿ ಒಂದಾದ ನಾಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಒಂದು ಪಂಕ್ತಿ ಹೀಗೆ ತಮಿಳಿನಲ್ಲಿ “ತಿರು ನಾಗೇಶ್ವರಸ್ವಮಿಕ್ಕು ಚಿತ್ತರೆ ಮಾಸತ್ತಿಲ್ ತೈಪೊಸಂ’” ಎಂದು ಕೆತ್ತಲಾಗಿದೆ.
ಊರಿನ ಹಿರಿಯರಾದ ಶ್ರೀ ಸಿದ್ದಲಿಂಗಪ್ಪರಾಧ್ಯರ ( ಸಿದ್ದು ಮೇಸ್ಟ್ರು) ಪ್ರಕಾರ ಇದೇ ಕುಲೋತ್ತುಂಗ ರಾಜ ಕುಂಬಕೋಣಂನಲ್ಲಿಯೂ ಸಹ “ತಿರುನಾಗೇಶ್ವರ ದೇವಸ್ಥಾನ” ಕಟ್ಟಿಸಿದ್ದು, ಆಲ್ಲಿ ನಡೆಯುವ ತೈಪೊಸಂ(ರಥೋತ್ಸವ) ದಂತೆ ಇಲ್ಲೂ ಸಹ ಕುಲೋಂತುಂಗನ ಕಾಲದಿಂದ ಈವರೆಗೆ ಅಂದರೆ ಸುಮಾರು 850. ವರ್ಷಗಳಿಂದ ಪ್ರತಿವರ್ಷ ಚೈತ್ರಮಾಸದಲ್ಲಿ ಅನುರಾಧ ನಕ್ಷತ್ರದ ದಿನದಂದು ಬ್ರಹ್ಮರಥೋತ್ಸವ ತಪ್ಪದೇ ನಡೆದುಕೊಂಡು ಬರುತ್ತಿದೆ.
ದೇವಸ್ಥಾನದ ಗರುಡಗಂಬ ಸುಮಾರು 30 ಆಡಿ ಎತ್ತರವಾಗಿದೆ ಸಿಂಪನದಿ ಎಂಬಾತ ಇದನ್ನು ನಿರ್ಮಿಸಿದನೆಂದು ಹೇಳುತ್ತಾರೆ. ಇದರ ನಾಲ್ಕು ಪಾಶ್ವಗಳಲ್ಲಿ ಉಬ್ಬು ಶಿಲ್ಪಗಳಿವೆ. ಒಂದೆಡೆ ನಂದಿ ಮತ್ತೋಂದೆಡೆ ಸಿಂಹ ಗಣಪತಿ ಹಾಗೂ ತ್ರಿಶೂಲವಿದೆ. ಚೋಳೇಶ್ವರ ದೇವಾಲಯದ ಗರ್ಭಗುಡಿಯ ಕಲ್ಲಿನ ಬಾಗಲುವಾಡಿಯ ಮೇಲೆ ಗಂಗರ ಲಾಂಛನವಾದ ಆನೆ ಹಾಗೂ ಚೋಳರ ಲಾಂಛನ ಸಿಂಹವನ್ನು ಕೆತ್ತಲಾಗಿದೆ. ದೇವಸ್ಥಾನದ ಪಕ್ಕದಲ್ಲೇ ಇರುವ ಬೃಹತ್ ಕೆರೆಯಂಗಳ ಜಮೀನು ಇಂದು ಪರಭಾರೆಯಾಗಿದ್ದು ದೇವಾಲಯಕ್ಕೆ ಯಾವುದೇ ದಾಯವಿಲ್ಲವಾಗಿದೆ. ಉಳುವವನೆ ಒಡೆಯ ಎಂಬ ಕಾನೂನು ಜಾರಿಗೆ ಬಂದ ನಂತರ ಇಲ್ಲಿನ ಕೋಟೆ ಅದರೊಳಗಿನ ದೇವಾಲಯ ರಾಗಿ ಹೊಲವಾಗಿದೆ ಈಗ ಬಯಲು ಬಂಧಿಖಾನೆ ನಿರ್ಮಾಣವಾಗಿರುವ ಪರಪ್ಪನ ಆಗ್ರಹಾರ ದೇವಾಲಯದ ದತ್ತಿ ಭೂಮಿ.
ಮೈಸೂರು ಮಹಾಸಂಸ್ಥಾನದ ಮಹಾರಾಜರಾಗಿದ್ದ ದಿ.ಜಯಚಾಮರಾಜೇಂದ್ರ ಒಡೆಯರ್ ಹಾಗೂ ಅವರ ತಂದೆ ಮತ್ತು ದಿವಾನರಾಗಿದ್ದ ವಿರ್ಜಾ ಇಸ್ಮಾಯಿಲ್ರವರುಗಳು 1933-34 ರಲ್ಲಿ ಈ ಊರಿಗೆ ಭೇಏ ನೀಡಿ ಊರಿಗೆ ವಿದ್ಯೂತ್ ಪೂರೈಕೆ ಘಟಕ ಹಾಗೂ ಆಸ್ಪತ್ರೆ ಆರಂಭಿಸಿದ್ದರು. ಊರಿನ ಜನ ಇತ್ತೀಚೆಗೆ ಎಚ್ಚರಗೊಂಡು ದೇವಾಲಯದ ಜೀರ್ಣೋದ್ದಾರಕ್ಕೆ ಶ್ರಮಿಸುತ್ತಿರುವುದು ಕೇವಲ ದೇವಾಲಯದ ರಕ್ಷಣೆ ಮಾತ್ರವಲ್ಲ ಒಂದು ಇತಿಹಾಸವನ್ನು ರಕ್ಷಿಸುವ ಯತ್ನವೂ ಆಗಿದೆ.
ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ವಿಶೇಷ ಪೂಜೆಗಳು
ಅಮಾವಾಸ್ಯೆ ಪೂಜೆ 14.10.2023
ಬೇಗೂರಿನ ಶ್ರೀ ವೀರಭದ್ರೇಶ್ವರ ಸ್ವಾಮಿಗೆ 14ನೇ ತಾರೀಖು ಶನಿವಾರ ಪಿತೃಪಕ್ಷದ ಅಮಾವಾಸ್ಯೆ ಯಂದು ಸ್ವಾಮಿಗೆ ವಿಶೇಷ ರುದ್ರಾಭಿಷೇಕವನ್ನು ಏರ್ಪಡಿಸಲಾಗಿದೆ.
Tempor incididunt ut labore et dolore magna aliqua. Bibendum est ultricies integer quis. Iaculis urna id volutpat lacus laoreet. Mauris vitae ultricies leo integer malesuada. Ac odio tempor orci dapibus ultrices in. Egestas diam in arcu cursus euismod. Dictum fusce ut placerat orci nulla. Tincidunt ornare massa eget egestas purus
Viverra accumsan in nisl. Tempor id eu nisl nunc mi ipsum faucibus. Fusce id velit ut tortor pretium. Massa ultricies mi quis. hendrerit dolor magna eget. Nullam eget felis eget nunc lobortis. Faucibus ornare suspendisse sed nisi.